ಪುತ್ತೂರಿಂದ ಮೈಸೂರಿಗೆ...

#ಸುಳ್ಯ_ಮಡಿಕೇರಿ_ಮೈಸೂರ್_ಮೈಸೂರ್...
ಆಗಿನ್ನೂ ನನಗೆ 13 ವರ್ಷ. ರಜಾದಿನಗಳವು. ಮೋಜು, ಮಸ್ತಿ, ಆಟ ಹೀಗೆ ಅನೇಕ ಆಲೋಚನೆಗಳು ಮನಸ್ಸಿನಲ್ಲಿ ತುಂಬಿದ್ದವು. ಮನೆಯಲ್ಲಿ ಟಿವಿ ನೋಡೋದು, ಲೂಡೋ ಆಡೋದು, ತಂಗಿ ಜೊತೆ ಕಚ್ಚಾಡೋದು ಹೀಗೆ ಸಾಗುತ್ತಿತ್ತು ರಜಾದಿನಗಳು.
ಒಂದು ದಿನ‌ ಮೈಸೂರಿನ ನಂಜನಗೂಡುನಲ್ಲಿರೋ ಮಾವನ ಮನೆಗೆ ಹೋಗೋಣ ಅಂತ Plan ಮಾಡಿದೆ. ಮನೆಯಲ್ಲಿ Permission ಕೂಡಾ ಸಿಕ್ಕಿತು. ಆದರೆ ನಾನೊಬ್ಬನೇ ಹೋಗಬೇಕಿತ್ತು ಮೈಸೂರಿಗೆ. ಆದರೂ ಧೈರ್ಯದಿಂದ ಹೊರಟು ನಿಂತೆ. ಮೊದಲ ಬಾರಿ ಒಬ್ಬನೇ ಹೋಗುತ್ತಿರುವ ಕಾರಣ ರಾತ್ರಿ ಪ್ರಯಾಣ ಬೇಡ ಹಗಲಿನ ಪ್ರಯಾಣವೇ ಒಳಿತು ಎಂದು ಮನೆಯಲ್ಲಿ ಹೇಳಿದರು. ಹೇಗಿದ್ದರೂ ಹಿರಿಯರ ಉಪದೇಶ ಪಾಲಿಸುವುದು ಕಿರಿಯರ ಕರ್ತವ್ಯ ತಾನೇ. ಅದಕ್ಕೆ ಸರಿ ಅಂತಂದು ಅದೊಂದು ದಿನ ಬೆಳಗ್ಗೆ 8:30ಕ್ಕೆ ಮನೆಯಿಂದ ಹೊರಟೆ.
8:45ಕ್ಕೆ ಪುತ್ತೂರಿನ Bus Stand ತಲುಪಿದ್ದೆ. ಅಲ್ಲೇ ಇದ್ದ Officeನಲ್ಲಿ Mysore Bus ಎಷ್ಟು ಗಂಟೆಗೆ ಅಂತ ಕೇಳಿದೆ. ಅವರು ಹೇಳಿದರು, ಈಗ ತಾನೇ 8:30ಕ್ಕೆ ಒಂದು ‌ಬಸ್ ಹೋಯಿತು. ಇನ್ನು 9:15ಕ್ಕೆ ಅಂತದ್ರು. ನಾನು ಅಲ್ಲೇ ಇದ್ದ ಪೇಪರ್ ಅಂಗಡಿಯಿಂದ ಒಂದು ಪೇಪರ್ ತಗೊಂಡು ಓದ್ತಿದ್ದೆ. ಕೊನೆಗೂ ಬಸ್ ಬಂತು. ಆ ಬಸ್ ನ ನೋಡಿದಾಗ ಅಯ್ಯೋ ಈ ಬಸ್ ನಲ್ಲಿ ಮೈಸೂರು ತನಕ ಹೋಗ್ಬೇಕಲ್ಲಾ ಅಂತ ಅನಿಸ್ತಿತ್ತು. ತುಂಬಾ ರಷ್ ಬೇರೆ ಇತ್ತು. ವಾಪಾಸ್ ಆ Office ಬಳಿ ಹೋಗಿ ಕೇಳಿದೆ, ಯಾವುದಾದರೂ Luxury Bus ಇದ್ಯಾ ಮೈಸೂರಿಗೆ ಅಂತ. ಅದಕ್ಕೆ ಅವರು ಇವಾಗ ಒಂದು ಬರಬಹುದು, ಅದು ಬಿಟ್ರೆ ರಾತ್ರೀನೇ ಇರೋದು ಅಂತಂದ್ರು. ನಾನು ಆ ಬಸ್ ಇನ್ನೇನು ಬರಬಹುದು ಅಂತ ಕಾಯ್ತಾ ಇದ್ದೆ. ಘಂಟೆ 10 ಆದದ್ದೂ ಗೊತ್ತಾಗಿಲ್ಲ. ಅಷ್ಟೊತ್ತಿಗೆ 2 Ordinary ಬಸ್ ಗಳು ಪಾಸ್ ಆಗಿತ್ತು. ಇನ್ನು ಕಾದರೆ ಆಗಲಿಕ್ಕಿಲ್ಲ ಅಂತ 10:30ಕ್ಕೆ ಬಂದ Ordinay Bus ಹತ್ತಿದೆ.
ಬಸ್ ಹೊರಟು ಹೋಗ್ತಾ ಇತ್ತು. ಹೇಗಿದ್ದರೂ ತುಂಬಾ ದೂರದ ಪ್ರಯಾಣ. Time passಗೆಂದು Ear Phone ಹಾಕಿಕೊಂಡು Songs ಕೇಳ್ತಿದ್ದೆ. Bus Conductor ಬಂದದ್ದೇ ಗೊತ್ತಾಗಲಿಲ್ಲ. ಟಿಕೆಟ್ ಮಾಡಿ ಅವರ ಬಳಿ ಕೇಳಿದೆ, ಮೈಸೂರಿಗೆ ಮುಟ್ಟುವಾಗ ಎಷ್ಟೊತ್ತು ಆಗಬಹುದು ಅಂತ. ಅದಕ್ಕವರು ಸಂಜೆ 5:30 - 6:00 ಗಂಟೆಯೊಳಗೆ ಮುಟ್ಟಬಹುದು ಅಂತ ಅಂದ್ರು. ಹಾಗೇ ಮಾತಾಡ್ತಾ ಮಾತಾಡ್ತಾ ಹೋಗ್ತಿದ್ದೆವು. ಆ Conductor ಒಂಥರಾ ಗೆಳಯನ ಹಾಗೆ ಆಗಿದ್ರು. ಪುತ್ತೂರು, ‌ಸುಳ್ಯ, ಮಡಿಕೇರಿ, ಹುಣಸೂರು, ಮೈಸೂರು ಹೀಗಿತ್ತು ನನ್ನ ಪ್ರಯಾಣ. ಪ್ರಯಾಣದ ವೇಳೆಯಲ್ಲಿ ಅನೇಕ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದೆ. ಸಂಪೂರ್ಣ ಹಸಿರಿನಿಂದ ಕೂಡಿದ ಕಾಡುಗಳು, ಅಲ್ಲಲ್ಲಿ ಓಡಾಡುವ ಕಪಿ ಸೇನೆಗಳು, ಮಂಜಿನಿಂದ ಆವರಿಸಿರುವ ಪರ್ವತಗಳು, ದೊಡ್ಡ ದೊಡ್ಡ ಬಂಡೆಕಲ್ಲುಗಳು ಹೀಗೆ ಅನೇಕ ಪ್ರಕೃತಿ ವಿಸ್ಮಯಗಳು ಕಣ್ಣ ಮುಂದೆ ಹಾದುಹೋಗುತ್ತಿದ್ದವು. ಇದರ ಮಧ್ಯೆ Conductorನ ಮಾತುಗಳು, ತಮಾಷೆಗಳು, ಅದಕ್ಕೆ ಇತರ ಪ್ರಯಾಣಿಕರ ಸ್ಪಂದನೆಗಳು ಬಸ್ ನಲ್ಲಿ ಹೊಸ ಛಾಪನ್ನು ಮೂಡಿಸಿದ್ದವು. ಹೀಗೆ ಪ್ರಯಾಣಿಸುತ್ತಾ ಮಡಿಕೇರಿಗೆ ತಲುಪಿದ್ದೇ ಗೊತ್ತಾಗಲಿಲ್ಲ.
ಅಲ್ಲಿ ಬಸ್ ನಿಂದ ಎಲ್ಲರೂ ಇಳಿಯುತ್ತಿದ್ದರು. ನಾನು Bus Driverನ ಬಳಿ ಹೋಗಿ Bus ಹೊರಡೋದಕ್ಕೆ ಎಷ್ಟು ಹೊತ್ತಿದೆ ಅಂತ ಕೇಳಿದೆ. ಆ Driverಗೆ ಕನ್ನಡ ಬರುತ್ತಿರಲಿಲ್ಲಾ. ಅವರೇನೋ ಅಂದ್ರು. ನಾನು ಒಂದು 5 ನಿಮಿಷ ಹೊರಡಲಿಕ್ಕಿಲ್ಲಾ ಅಂತ ಬಸ್ ನಿಂದ ಇಳಿದೆ. ಅಲ್ಲೇ ಆ Conductor ಇದ್ರು. ನಾವಿಬ್ಬರೂ Recessಗೆ ಅಂತ ಹೋದೆವು. Return ಬಂದಾಗ ಒಂದು ದೊಡ್ಡ ಅಚ್ಚರಿ ಕಾದಿತ್ತು.
ಅಲ್ಲಿ ನಾನು ಪ್ರಯಾಣಿಸುತ್ತಿದ್ದ ಬಸ್ ಕಾಣ್ತಾ ಇರಲಿಲ್ಲ. ನನಗೆ ಒಂಥರಾ ಭಯ ಆಗೋಕೆ ಶುರುವಾಯಿತು. ನನ್ನ Bag ಬಸ್ ನಲ್ಲೇ ಇತ್ತು. But ಒಂದು ಕಡೆ ಆ ಭಯವೆಲ್ಲಾ ಓಡಿ ಹೋಯಿತು. ಕಾರಣ ಅವತ್ತು ಅಜ್ಜಿ ಹೇಳುತ್ತಿದ್ದ ಮಾತುಗಳು, "ಎಣ್ಣೆ ಇಲ್ಲದೆ ಪೋಡಿ ಕಾಯದು, Conductor ಸೀಟಿ ಊದದೇ ಬಸ್ ಹೋಗದು" ಇದು ನೆನಪಾಯ್ತು. Conductor ನನ್ನ ಪಕ್ಕದಲ್ಲಿ ನಿಂತಿದ್ರು. ನಾನು ಏನ್ಮಾಡೋದು ಈಗ ಅಂತ ಅವರತ್ರ ಕೇಳಿದೆ. ಅದಕ್ಕವರು ಹ್ಯೇ... ಅದು ಜಾಸ್ತಿ ಏನು ದೂರ ಹೋಗಿರಲಿಕ್ಕಿಲ್ಲ, ಇಲ್ಲೇ ಪೇಟೆಯಲ್ಲಿರುತ್ತೆ ಅಂತ ಅಲ್ಲೇ ಇದ್ದ Office ಬಳಿ ಓಡಿದರು. ಅದೇನೋ ಅಲ್ಲಿ ಮಾತಾಡಿ ಹೊರಬಂದರು, ಅಷ್ಟರಲ್ಲಿ ಆ ಬಸ್ Bus Standಗೆ ಬಂತು. ನನಗೆ ಅಬ್ಬಾ ಎಲ್ಲಾ ಅಜ್ಜಿ ಪುಣ್ಯ... ಅಂತ ಅನಿಸ್ತು. ಓಡಿ ಹೋಗಿ ಬಸ್ ಹತ್ತಿದೆ. Conductor ಕೂಡ ಬಂದರು, ಸೀಟಿ ಊದಿದರು, ಬಸ್ ಹೊರಟಿತು.
ಬಸ್ ನಲ್ಲಿದ್ದ ಸಹ ಪ್ರಯಾಣಿಕರೆಲ್ಲಾ ನಮ್ಮನ್ನ (ನನ್ನ ಮತ್ತು Conductorನ) ಒಂಥರಾ ನೋಡ್ತಾ ಇದ್ರು. ನನಗೆ ಮುಜುಗರವಾಗ್ತಿತ್ತು. ಆದರೆ ಆ Conductor ಇದನ್ನೆಲ್ಲಾ ಕ್ಯಾರೇ ಮಾಡದೆ ಪುನಃ ತಮಾಷೆಯಲ್ಲಿ ತೊಡಗಿದರು. ನಾನು Ear Phone ಹಾಕಿ ಹಾಡು ಕೇಳ್ತಿದ್ದೆ. ಹಾಗೇ ಹಾಡು ಕೇಳುತ್ತಾ ಇರುವಾಗ  ಆ Conductor ಬಂದು Ear Phone Socketನ Mobileನಿಂದ ತೆಗೆದದ್ದೇ ಗೊತ್ತಾಗಲಿಲ್ಲ. ಕೆಲವರಂತೂ ಆ Mere Sapno Ki Rani Kab Aayegi Tho ಹಾಡಿಗೆ ಕುಣಿದದ್ದೇ ಕುಣಿದದ್ದು.
ಹೀಗೆ ಕೇಕೇ ಹಾಕುತ್ತಾ, ಕುಣಿದು ಕುಪ್ಪಳಿಸುತ್ತಾ ಮಧ್ಯಾಹ್ನ ಸುಮಾರು 2:00 - 3:00 ಗಂಟೆ ಅಂದಾಜಿಗೆ ಹುಣಸೂರು ತಲುಪಿದೆವು. ಅಲ್ಲಿ ಊಟ ಮುಗಿಸಿ ಬಸ್ ಹತ್ತಿದೆವು. ಆಗ ಮಳೆ ಶುರುವಾಗಿತ್ತು. ಬಸ್ ನಲ್ಲಿದ್ದ ಪ್ರಯಾಣಿಕರೆಲ್ಲರೂ ಆ ಮಳೆಯ ನಾದವನ್ನು ಕೇಳಿ ನಿದ್ದೆಗೆ ಜಾರಿದ್ದರು. Conductor ಮತ್ತು ನಾನು ಒಟ್ಟಿಗೆ ಕುಳಿತು ಆ ಪ್ರಕೃತಿಯ ರಮಣೀಯ ಕ್ಷಣಗಳನ್ನು ಕಳೆಯುತ್ತಿದ್ದೆವು. ಅಂತೂ ನಾನು ತಲುಪಬೇಕಾಗಿದ್ದ ಮೈಸೂರು ಕೊನೆಗೆ ಬಂದೇಬಿಟ್ಟಿತು.

Comments

  1. Replies
    1. ಹೌದು... ಆ ಮಜಾದ ದಿನಗಳು... ಇನ್ನು ಸಿಗಲಿಕ್ಕಿಲ್ಲ

      Delete
  2. We often remember some wonderful real time experience..nice ...

    ReplyDelete
  3. We often remember some wonderful real time experience..nice ...

    ReplyDelete
  4. ಉತ್ತಮರಿಗಷ್ಟೇ ಉತ್ತಮರು ಕಾಣ್ತಾರೆ,ಸಿಕ್ತಾರೆ..... ನಿರೂಪಣೆ ಚೆನ್ನಾಗಿದೆ

    ReplyDelete
  5. ಚೆನ್ನಾಗಿದೆ...... ಪಯಣದ ಸವಿ ನೆನಪುಗಳು......

    ReplyDelete
  6. ಸರಳ ಸುಂದರ ನಿರೂಪಣೆ. 13 ವರ್ಷದ ಹುಡುಗ ear phone ಹಾಕ್ಕೊಂಡು........😊 ಬಹಳ ಚೂಟಿ ಪೋರ😃

    ReplyDelete
  7. ಬರವಣಿಗೆ ಶೈಲಿಯು ನಾನೇ ಸ್ವತಃ ಪುತ್ತೂರಿಂದ ಮೈಸೂರು ಹೋಗುವ ರೀತಿ ಅನುಭವವಾಯಿತು.

    ಕ್ರಿಯೆಯನ್ನು ಕೃತಿ ರೂಪದಲ್ಲಿ ವಿವರಿಸಿದ ತಮಗೆ ಕೃತಜ್ಞತೆಗಳು

    ReplyDelete
  8. ಪ್ರಾಯಶಃ ಮರಳಿ ಪಡೆಯದ ಬಾಲ್ಯದ ದಿನಗಳು.
    ನಿಮ್ಮ ನೆನಪುಗಳು ನಮ್ಮ ಬಾಲ್ಯದ ದಿನವನ್ನು ವಿಶೇಷ ಘಟನೆಗಳನ್ನು ನೆನಪಿಸಿದವು.
    ನಿಮಗಿದೋ ಅಂತರಾಳದ ಕೃತಜ್ಞತೆಗಳು

    ReplyDelete
  9. ಇನ್ನೂ ಸ್ವಲ್ಪ ಉತ್ತಮವಾದ ನಿರೂಪಣೆ ಮೂಲಕ ಹೇಳಿದರೆ ಚೆನ್ನಾಗಿರ್ತಿತ್ತು..
    ೧೩ ನೇ ವಯಸ್ಸಿನ ಮಕ್ಕಳು ಯಾವ ರೀತಿಯಲ್ಲಿ ಪ್ರಯಾಣದ ಬಗ್ಗೆ ಹೇಳ್ತಾರೋ ಆ ರೀತಿಯಲ್ಲೇ ಉಂಟು.ಉತ್ತಮವಾದ ಪ್ರಯತ್ನ..ಲೇಖನದ ಹವ್ಯಾಸವನ್ನು ಮುಂದುವರಿಸಿ.

    ReplyDelete
    Replies
    1. ಖಂಡಿತ ಪ್ರಯತ್ನ ಪಡುತ್ತೇನೆ... ನಿಮ್ಮ ಹಾರೈಕೆಗೆ ಮನದಾಳದ ಕೃತಜ್ಞತೆಗಳು😊🙏

      Delete
  10. Nice work brother. Making a difference!

    ReplyDelete
  11. Naija anubhavagalu ✌️👌👌

    ReplyDelete
  12. ಬರವಣಿಗೆಯ ಒಳ್ಳೆಯ ಪ್ರಯತ್ನ.. ಮುಂದುವರೆಯಲಿ

    ReplyDelete

Post a Comment

Popular posts from this blog

ಅಪ್ಪ-ಮಗನ ಕಾರುಬಾರು...

ನಾ ಕಂಡ ಚಲನಚಿತ್ರಗಳ ಪೈಕಿ ಕೆಲವೊಂದರ Reviews...