ಅಪ್ಪ-ಮಗನ ಕಾರುಬಾರು...

ಅದೊಂದು ಸುಂದರ ಅನುಭವ...
ರಾತ್ರಿ ೮ರ ಅಂದಾಜು... ಮನೆಯಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದೆವು...
ಊಟ ಮಾಡುತ್ತಾ ಇರುವಾಗ ನಾನು: ಅಪ್ಪಾ ನಿಮ್ಮ ಜ್ವರ ಹೇಗಿದೆ?
ಅಪ್ಪಾ: ಇಲ್ಲ ಮಗಾ ಕಮ್ಮಿ ಆಗಿಲ್ಲಾ, ಡಾಕ್ಟರ್ ಬಳಿ ಹೋಗೋಣ್ವಾ...
ನಾನು: ಹಾ... ಸರಿ ಹೋಗೋಣ...
ಊಟ ಆದ್ಮೇಲೆ, ಡಾಕ್ಟರ್ ಗೆ Call ಮಾಡಿ ಕೇಳಿದಾಗ ಹಾ... ಇದ್ದೇನೆ ಬನ್ನಿ ಅಂತದ್ರು...
ಹೊರಗಡೆ ಮಳೆ ಹನಿಯ ಜುಳು ಜುಳು ನಾದ... ತುಂಬಾ ತಂಪಿನ ವಾತಾವರಣ...
ಅಂತೂ ಸ್ಕೂಟಿ ಕೀ ಹಿಡ್ಕೊಂಡು, ಅಪ್ಪನ ಕೂರ್ಸ್ಕೊಂಡು, ಹೆಲ್ಮೆಟ್ ಹಾಕ್ಕೊಂಡು, Rain Coat ಹಾಕೊಳ್ಳದೆ ಹೊರಟಿತು ನಮ್ಮ ಸವಾರಿ...
ಡಾಕ್ಟರ್ ನ ಕ್ಲಿನಿಕ್ ಗೆ ಹೋಗಿ ಮದ್ದು ತೆಗೊಂಡು Return ಮನೆಗೆ ಬರುತ್ತಿದ್ದೆವು...
ಅದೊಂದು ಸುಂದರ ಅನುಭವ... ಸುತ್ತಲೂ ಗಾಳಿ... ತಂಪಾದ ವಾತಾವರಣ... ಮಳೆ ಹನಿಗಳು... ವ್ಹಾ... ಸೂಪರ್...
ಮನೆಗೆ ಇನ್ನೇನು ಮುಟ್ಟಬೇಕು ಅನ್ನುವಷ್ಟರಲ್ಲಿ  ಅಪ್ಪ ಅಂದರು...
ಮಗಾ ಅಲ್ಲಿ Road Sideನಲ್ಲಿ ಸ್ವಲ್ಪ ಮುಂದೆ ಒಂದು ಮಾವಿನ ಮರ ಇದೆ... ಈಗಷ್ಟೇ ಮಳೆ ಬಂದಿದೆ... ಮಾವಿನ ಹಣ್ಣುಗಳು ಬಿದ್ದಿರುತ್ತೆ... ಹೋಗಿ ಹೆಕ್ಕೋಣ್ವಾ ಅಂದರು...!!!
ನನಗನಿಸುತ್ತಿತ್ತು... ಈ ಅಪ್ಪನಿಗೆ Rain Coat ಹಾಕಿಕೊಳ್ಳಿ ಅಂದರೆ ಕೇಳಲ್ಲ ಇವಾಗ ಈ ಮಾವಿನ ಹಣ್ಣು... ಅಮ್ಮನಿಗೆ ಗೊತ್ತಾದರೆ ಮನೆಯಲ್ಲಿ ನನಗೆ ಮಂಗಳಾರತಿ ಬೇರೆ... ಆದ್ರೂ ಅಪ್ಪನಿಗೆ ಬೇಸರ ಆಗಬಾರದೆಂದು ನಾನು ಸರಿ ಹೆಕ್ಕೋಣ ಅಂತಂದೆ...
ಸ್ಕೂಟಿ ಹಿಂದೆ ತಂದು ಆ ದಾರಿಯ ಮುಂದೆ ನಿಲ್ಲಿಸಿ Head Light On ಮಾಡಿ ಇಳಿದು ಅಪ್ಪನನ್ನು ಅದರಲ್ಲೇ ಸ್ವಲ್ಪ Accelerate ಕೊಟ್ಟು ಕೂತುಕೊಳ್ಳಿ ಅಂತಂದೆ...
ನಾನು Mobile ನ Flash Light On ಮಾಡಿ ತಲೆಗೆ ಹಾಕಿದ್ದ Helmet ಅನ್ನೂ ತೆಗೆಯದೆ ಆ ಮಳೆಗೆ ಸವಾಲೊಡ್ಡಿ ಮಾವಿನ ಹಣ್ಣನ್ನು ಹೆಕ್ಕುವುದಕ್ಕೆ ಶುರು ಮಾಡಿದೆ...
ಹೆಕ್ಕಿ ತಂದು ಅಪ್ಪನಿಗೆ ಕೊಟ್ಟೆ... ಅವರು ಅಲ್ಲೇ ಇದ್ದ ಉಪ್ಪಳಿಗೆ ಮರದ ಎಲೆಯನ್ನು ಕೊಯ್ದು, ಅದರಲ್ಲಿ ಹಣ್ಣನ್ನು ಸುತ್ತಿ ಹಿಡಿದುಕೊಂಡು ಸ್ಕೂಟಿಯಲ್ಲಿ ಕುಳಿತುಕೊಂಡರು...
ಅಂತೂ ಅಲ್ಲಿಂದ ಹೊರಟು ಮನೆಗೆ ತಲುಪಿದೆವು... ಮನೆಯಲ್ಲಿ ಮಾವಿನ ಹಣ್ಣನ್ನು ನೋಡಿ ಎಲ್ಲರಿಗೂ ಖುಷಿಯೋ ಖುಷಿ... ನಾಳೆ ಅದನ್ನು ಏನು ಮಾಡೋಣ ಅಂತಾನೆ ಮಾತುಕತೆ... ಹೆಕ್ಕಿ ತಂದ ನನ್ನ ಗತಿ... ನನ್ನತ್ತ ಸುಳಿದು ನೋಡಿಲ್ಲ ಮನೆಯಲ್ಲಾರು...
ಅಂತು ಅಪ್ಪನೊಂದಿಗಿನ ಸುಂದರ ಅನುಭವ ಅದು...
ಎಂದೂ ಮರೆಯಲಾಗದ ಘಟನೆ...

✍ ಶ್ರೀಕರ ಕಲ್ಲೂರಾಯ.

ಈ ಬರವಣಿಗೆಯು ೨೦೧೭ನೇ ಮೇ ೯ರಂದು ವಿಶ್ವವಾಣಿ ದಿನಪತ್ರಿಕೆಯ ವಿ+ ನಲ್ಲಿ ಪ್ರಕಟಗೊಂಡಿದೆ.


Comments

Post a Comment

Popular posts from this blog

ಪುತ್ತೂರಿಂದ ಮೈಸೂರಿಗೆ...

ನಾ ಕಂಡ ಚಲನಚಿತ್ರಗಳ ಪೈಕಿ ಕೆಲವೊಂದರ Reviews...