ಹದಿಹರೆಯದಲ್ಲಿ ನಾ ರಚಿಸಿದ ಮೂವತ್ತೆರಡು ಹನಿಗವನಗಳು...

೧. ಅವಳ ಮೊದಲ ನೋಟಕ್ಕೆ ನಾ ಮನಸೋತೆ...
ಅವಳೊಂದಿಗೆ ನಾ ಬೆರೆತೆ...
ಸುತ್ತಾಡಿದೆ ನಾ ಅವಳ ಜೊತೆ...
ಮುಗಿಯಿತು ನನ್ನ ಬ್ಯಾಂಕಿನ ಖಾತೆ...
ಪ್ರೀತಿಯ ಅಲೆಯಲ್ಲಿ ನನ್ನ ನಾ ಮರೆತೆ...

೨. ಪ್ರೀತಿಗೂ ಇದೆ ಒಂದು ನೀತಿ...
ಆದರೆ...
ಮೀರಿದರೆ ಅದರ ‌ಮಿತಿ...
ಪಡಬೇಕಾಗುವುದು ಫಜೀತಿ...

೩. ಅವಳನ್ನು ನೋಡಿದೆ ನಾ ಒಂದು ಬಾರಿ...
ಹಿಂಬಾಲಿಸಿದೆ ನಾ ಅವಳ ಪ್ರತಿ ಸಾರಿ...
ಹಾಗೆ ಹೋಗಿ ಕೆಸರಿನಲ್ಲಿ ಬಿದ್ದೆ ಜಾರಿ...
ಇದನ್ನು ನೋಡಿ ನಕ್ಕಳವಳು ಹೌಹಾರಿ...
ನನಗನಿಸುತಿತ್ತು...
ಯಾಕಾದರೂ ಸಿಕ್ಕಳಪ್ಪ ಈ ಮಾರಿ...

೪. ನಿನಗಾಗಿ ನಾ ಬರೆದೆನೊಂದು ಕವನ...
ನೀ ಅದರ ಓದಿದರೆ ನನ್ನ ಜನ್ಮ ಪಾವನ...
ನೀ ಅದರ ಓದದಿದ್ದರೆ ಬರಡು ಈ ಜೀವನ...
ಇದೇ ಈ ಯೌವ್ವನದ ಪಯಣ...

೫. MODERN ಪ್ರಾತಃ ಸ್ಮರಣೆ
ಕರಾಗ್ರೇ‌‌ ವಸತೇ MOBILE...
ಕರ ಮಧ್ಯೇ FACEBOOK...
ಕರ ಮೂಲೇತು‌ WHATSAPP...
ಪ್ರಭಾತೇ ಲೋಕ ದರ್ಶನಂ...

೬. ಅವಳ ಮೊದಲ ದರ್ಶನವಾದಾಗ ನಾ ಅಂದೆ..‌.
ನಾನೊಂದು ತೀರಾ ನೀನೇಕೆ ದೂರಾ...
ಅದಕ್ಕೆ ಅವಳಂದಳು...
ದಾನೆಂಬೆ ಶ್ರೀಕರ ಬೋಡಾ ಶೀರಾ...

೭. ಅವಳ ಹೆಸರು ಸುಮಾ...
ಎತ್ತರದಲ್ಲಿ ನನಗೆ ಸರಿ ಸಮಾ...
ಪ್ರೀತಿಸಿದೆ ನಾ ಅವಳ ದಿನಾ...
ಆದರೆ...
ಅರ್ಥವಾಗದೆ ನನ್ನ ಪ್ರೀತಿ...
ಹಾಕೇ ಬಿಟ್ಟಳು ನನಗೆ ಮೂರು ನಾಮ...

೮. ಈ ಬಾಳ ಪಯಣದಲ್ಲಿ...
₹500/₹1000 ನೋಟಿಗಾಯಿತು ಅಕಾಲಿಕ ಮರಣ...
ಇದರಿಂದಾಗಿ‌‌‌...
ಕೆಲವರಿಗೆ ತಲೆ ನೋವಾಗಿ ಪರಿಣಮಿಸಿತು ಕಾಂಚಣ...
ಹಲವರು ಗೊಣಗುತ್ತಿದ್ದರು ಕೆಲವರನ್ನ...

೯. ಕನಸಿನಲ್ಲಿ ಅವಳ ನೋಡುವಾಸೆ...
ಕಡಲ ತೀರದಲ್ಲಿ ಅವಳ ಪ್ರೀತಿಸುವಾಸೆ...
ಗಗನದಲ್ಲಿ ಅವಳ ಮುತ್ತಿಕ್ಕುವಾಸೆ...
ಅವಳ ಜೀವನದಲ್ಲಿ ಬೆರೆಯುವಾಸೆ...
ಆದರೆ, ಸಿಗಲಿಲ್ಲ ಅವಳು...
ಆಸೆಯೆಲ್ಲಾ ಆಯಿತು ನಿರಾಸೆ...

೧೦. ಜೀವನದ ಆಗು ಹೋಗುಗಳ ನಡುವಿನ ಅವಧಿಯಲ್ಲಿ ಪ್ರೀತಿಯೆಂಬುದು ಒಂದು (Seminar) ಪಾಠವಷ್ಟೇ...
ಅದನ್ನು ತಿಳಿದು ಮುಗಿಸಿದ ಮೇಲೆ ತಿಳಿಯಿತೆನಗೆ ಇದು ಬರೀ ವಿಧಿಯ ಆಟವಷ್ಟೇ...
ಬಲ್ಲವರಾರು ಈ ಜೀವನದ ಪರಾಕಾಷ್ಠೆ...

೧೧. ದಿನವಿಡೀ ಅವಳ ನೆನಪು ಬಿಡದೆ ಕಾಡಿತು...
ಅವಳ ನೆನಪಲ್ಲೇ ಪ್ರೀತಿಯು ಆಯಿತು...
ಕಣ್ಣೀರೆಂಬುದು ಗೊತ್ತಾಗದೆ ಬರ ತೊಡಗಿತು..‌‌.
ಒಲೆಯಲ್ಲಿಟ್ಟಿದ್ದ ಹಾಲು ಉಕ್ಕಿ ಹೋಗಿತ್ತು...

೧೨. ಕವನ ಬರೆಯಲೆಂದು ಕುಳಿತೆ ನಾನೊಂದು ದಿನ...
ನೆನಪಾದಳು LKG ಯ ಭಾವನಾ...
ಹೇಗೆ ಮರೆಯಲಿ ಅವಳ ನಾ...
ಅವಳ ನೆನಪಿನ ಗುಂಗಿನಲ್ಲಿ,
ಮುಗಿದೇ ಹೋಯಿತು ಆ ದಿನ...

೧೩. ನೆನಪೆಂಬುದು ಶಾಶ್ವತವಲ್ಲ ಈ ಜೀವನದಲ್ಲಿ...
ಕಲ್ಲು ಮುಳ್ಳು ತುಂಬಿದ ಈ ದಾರಿಯಲ್ಲಿ ಕೈ ಹಿಡಿದು ನಡೆಸೆನ್ನನು...
ಬ್ಯಾಲೆನ್ಸ್ ಎಂಬುದು ಶಾಶ್ವತವಲ್ಲ ಈ ಮೊಬೈಲ್‌ ನಲ್ಲಿ...
ಮೆಸೇಜ್ ಮಾಡಿ ಆಕ್ಟೀವ್ ಆಗಿಸೆನ್ನನು...

೧೪. ಸಾಧಿಸಬೇಕಾದರೆ ಯಶಸ್ಸು...
ಇರಬೇಕು ಮನಸ್ಸು...
ಕಾಣಬೇಕು‌ ಕನಸು...
ಮಾಡಬೇಕದರ ನನಸು...

೧೫. ಚೂರಿಯ ‌ಮೊದಲ‌ ಸ್ಪರ್ಶಕ್ಕೆ ಕಣ್ಣೀರ‌ ತರಿಸಿದೆ ನೀ ನನಗೆ...
ಇದರಿಂದ ಅನುಭವಿಸಿದೆ ನಾ ತಕ್ಕ‌ ಶಿಕ್ಷೆ...
ನನಗಿದೆ ನಿನ್ನ ‌ಮೇಲೆ ಕೋಪ, ತೀರಿಸುವೆ ನಾ ಅದರ ಒಂದು ದಿನ...
ಇಂತಿ ಈರುಳ್ಳಿಯಿಂದಾಗಿ ಮನನೊಂದವ..‌.

೧೬. ಮುದ್ದಾಗಿ ನೀ‌ ಕರೆದಾಗ...
ಖುದ್ದಾಗಿ ನಾ ಹಾಜರಿರುವೆ.‌‌..
ಆದರೆ,
ಮುದ್ದಾಗಿ ನಾ ಕರೆದಾಗ...
ನೀ ಏಕೆ ಬಾರದಿರುವೆ...
ಕಾದಿರುವೆ‌ ನಾ ನಿನಗಾಗಿ...
ಬಾಳೋಣ ನಾವು ಒಂದಾಗಿ...

೧೭. ೨೦೧೭ ನೇ ವರ್ಷಕ್ಕೆ ಸ್ವಾಗತ ಕೋರಿ ಬರೆದದ್ದು...

ಕೆಲವರು ಆಚರಿಸುವರಿಂದು ಹೊಸ ವರುಷ..‌.
ತರಲಿ ನಿಮಗೆಲ್ಲಾ ಹೊಸ ಹರುಷ...
ಮುಗಿಯಿತು ಕಳೆದ ವರುಷ...
ಬಾಳಿ ನೀವೆಲ್ಲಾ ನೂರೊಂದು ವರುಷ...

೧೮. ಅವಳು ಸಿಕ್ಕಳೆನಗೆ ಮೊನ್ನೆ...
ಕೇಳಿದೆ ನಾ ಅವಳ ಬಳಿ ಸುಮ್ಮನೆ...
ಪ್ರೀತಿಸುವೆಯಾ ನೀ ನನ್ನನೇ...
ಅದಕ್ಕೆ ಅವಳೆಂದಳು...
ಸವಿಯುವೆಯಾ ನನ್ನ ಚಪ್ಪಲಿಯ‌ ಬೆಚ್ಚನೇ...

೧೯. ಕಟ್ಟೋಣ ನಾವು ಪ್ರೀತಿಯೆಂಬ ಗೂಡೊಂದನು...
ಬಾಳೋಣ ನಾವಲ್ಲಿ ದಿನಾ...
ಮುಟ್ಟೋಣ ನಮ್ಮ ಗುರಿಯನ್ನು...
ಪ್ರೀತಿಸುತ್ತಾ ಪ್ರಕೃತಿಯನ್ನಾ...

೨೦. ಓ ಚೆಲುವೆ...
ನೀ ನಕ್ಕರೆ ಬಾಳು ಸಕ್ಕರೆ...
ನೀ ಅತ್ತರೆ‌ ನನ್ನೆದೆಗೆ ಬರೆ...
ನೀ ಕೋಪಿಸಿಕೊಂಡರೆ ನಿನ್ನ ಬಾಯಿ ಐದಾರು ಎಕರೆ...

೨೧. ಸುರಿವ ಕಣ್ಣೀರಿಗೆ ತಿಳಿಯದು ಮನಸಿನ ನೋವು...
ಆಡಿದ ಮಾತಿಗೆ ತಿಳಿಯದು ಮಾಡಿದ ಗಾಯ...
ಕಾಡಿದ ನೆನಪಿಗೆ ತಿಳಿಯದು
ಕೊಟ್ಟ ದುಃಖ...
ಯಾರಿಗೂ ತಿಳಿದಿಲ್ಲ ಒಳಗಿನ ನೋವು...
ತಿಳಿಯಬೇಕಾದದ್ದು ತಿಳಿದರೆ ಈ ಕಷ್ಟಕ್ಕಿಲ್ಲ ಅರ್ಥ...

೨೨. ಮಾಯಾಲೋಕದ ರಾಜನ ಮಗಳವಳು...
ನನ್ನ ಕನಸಲ್ಲಿ ದಿನಾ ಬರುವಳವಳು...
ಕಾಣಲ್ಲ ಯಾರ ಕಣ್ಣಿಗವಳು...
ಅವಳಿಗಾಗಿ ವ್ಯಯಿಸಿದೆ ಅನೇಕ ದಿನಗಳು...
ಸಿಕ್ಕೇ ಸಿಗುವಳು ನನಗವಳು...

೨೩. ಗೆಳತಿ...
ನಾಳೆಯ ನಿನ್ನ ಭೇಟಿಗೆ
ಇಂದು ಮನವು ತವಕಿಸುತ್ತಿದೆ...
ನಾಳೆ ಮಾತನಾಡಬೇಕಿದ್ದ ಮಾತುಗಳೆಲ್ಲವೂ ಇಂದು ತಾಲೀಮಿನಲ್ಲಿ ತೊಡಗಿದೆ...
ಮನದ ತುಂಬಾ ಖುಷಿಯು ತೇಲಾಡುತಿದೆ...

೨೪. ಕಾದು ಕುಳಿತಿರುವೆ ನಿನಗಾಗಿ...
ನೀನೆಂದು ಸಿಗುವೆ ನನಗಾಗಿ...
ಬಾಳೋಣ ನಾವು ಒಂದಾಗಿ...
ಬಾನಂಚಿನಲಿ ಹಾರೋಣ ಹಕ್ಕಿಯಾಗಿ...
ನೂರಾರು ವರ್ಷ ಜೊತೆಯಾಗಿ...

೨೫. ನಾನು ಗದ್ಯವಾಗಿದ್ದೆ...
ಅವಳು ಪದ್ಯವಾಗಿದ್ದಳು...
ನಮ್ಮ ಸಂಕಲನ ಚೆನ್ನಾಗಿಯೇ ಇತ್ತು...
ಅದು ಯಾರೋ ಬಂದು ಗೀಚಿದರು ರಗಳೆ‌...
ಕವನ ಓಡಿ ಹೋದಳು...
ನಾನು ಕಥೆಯಾದೆ...

೨೬. ಪ್ರಕೃತಿಯ ಅಂದ ಚಂದ...
ಆ ಸೌಂದರ್ಯದ ಮಧ್ಯೆ ಬೆರೆಯೋದು ಆನಂದ...
ನಾನದರ ಮಡಿಲಲ್ಲಿ ಜನಿಸಿದ ಕಂದ..‌.
ನಡೆಸೆನ್ನ ಜೀವನವ ನೆಮ್ಮದಿಯಿಂದ...

೨೭. ಪುರುಸೊತ್ತು ಎಂಬುದು ಯಾರಿಗಿದೆ ಹೇಳಿ ಈ ಜಗದೊಳು...
ಎಲ್ಲರೂ ತೊಡಗಿದರೆ ಅವರವರ ವೃತ್ತಿಯಲ್ಲಿ...
ಒಗ್ಗಟ್ಟು ಎಂಬುದು ಎಲ್ಲಿದೆ ಹೇಳಿ ಮನುಜ ಕುಲದೊಳು...
ಎಲ್ಲರೂ ಕಾಲಕ್ಕೆ ತಕ್ಕಂತೆ ಬದಲಾದಲ್ಲಿ...
ಜನನ ಮರಣದ ನಡುವಿನ ಅವಧಿಯಲ್ಲಿ ಬಾಳೋಣ ನಾವು ಎಲ್ಲದರೊಳಗೊಂದಾಗಿ...
ಪ್ರೀತಿಯಂಬ ಕಡಲಾಗಿ...

೨೮. ಧರೆಗಿಳಿದು ಬೇಗ ಬಾ ಓ ವರುಣ...
ತೋರು ನೀ ನಮ್ಮಲ್ಲಿ ಕಿಂಚಿತ್ ಕರುಣ...
ಈ ತಾಪಮಾನವೇ ನೀ ಬಾರದಿರುವುದಕ್ಕೆ ಕಾರಣ...
ನಿನಗಾಗಿ ಕಾಯುತ್ತಿರುವೆವು ನಾವು ಪ್ರತಿದಿನ...
ನಿನ್ನ ಆಗಮನಕೆ ತವಕಿಸುತ್ತಿದೆ ಈ ಮುದ್ದು ಮನ...

೨೯. ವಿಷು ಹಬ್ಬದ ಶುಭಾಶಯ ಕೋರಿ ಬರೆದದ್ದು...

ಸೌರಮಾನ ಯುಗಾದಿಯು ಇಂದು...
ನವ ವರುಷವು ಮನೆ ಮಾತಾಗಿದೆ ಇಂದು...
ಬೆಳಗೆದ್ದು ಅಮ್ಮ ಮಾಡಿದ ಬಿಸಿ ಬಿಸಿ ದೋಸೆಯ ತಿಂದು...
ಬರೆಯಲೆಂದು ಕುಳಿತೆ ಹೊಸ ಕವಿತೆಯೊಂದು...

೩೦. ಮಾಸಿ ಹೋದ ಕ್ಷಣಗಳು ಮತ್ತೆ ನನ್ನ ಕಾಡುತ್ತಿವೆ...
ಆ ಸುಂದರ ಕ್ಷಣಗಳು ನನ್ನ ಕಣ್ಣ ಮುಂದೆ ಹಾದು ಹೋಗುತ್ತಿವೆ...
ಅವುಗಳು ಮನದಲ್ಲಿ ಹೊಸ ಬೀಜ ಬಿತ್ತಿವೆ...
ಆ ಭಾವನೆಗಳೆಲ್ಲವೂ ಕಥೆಯಾಗಲು ಈಗ ಕಾಯುತ್ತಿವೆ...

೩೧. ಗೂಡೊಂದ ಕಟ್ಟಿದೆ ಹಕ್ಕಿಯು...
ಕಸ ಕಡ್ಡಿಗಳ ಹೆಕ್ಕಿಯು...
ಇಟ್ಟಿದೆ ಒಂದು ಮೊಟ್ಟೆಯು...
ನೀಡುತಿದೆ ಅದಕೆ ಶಾಖವು...
ನೋಡಲು ಬಲು ಅಂದವು...
ಈ ಹಕ್ಕಿಯ ಕುಟುಂಬವು...

೩೨. ಪುಲ್ಯ ಕಾಂಡೆ ಲಕ್ಕ್ ದ್...
ಆಟಿ ಅಮವಾಸ್ಯೆದ ಲೆಕ್ಕಡ್...
ಪಾಲೆ ಮರತ ಕೆತ್ತೆದ ಕಷಾಯ ಪರ್ ದ್...
ನಾಲ್ ಎಡ್ಡೆ ಪಾತೆರ್ ಗ...

✍🏻 ಶ್ರೀಕರ ಕಲ್ಲೂರಾಯ

ಈ ಹನಿಗವನಗಳಲ್ಲಿ ಆಯ್ದ ೪ ಹನಿಗವನಗಳು ವಿವೇಕಾನಂದ ತಾಂತ್ರಿಕ ವಿದ್ಯಾಲಯದ ೨೦೧೬-೧೭ನೇ ಸಾಲಿನ ನಿರ್ಮಾತೃ ವಾರ್ಷಿಕ ಸಂಚಿಕೆಯಲ್ಲಿ ಪ್ರಕಟಗೊಂಡಿದೆ‌.

Comments

Post a Comment

Popular posts from this blog

ಪುತ್ತೂರಿಂದ ಮೈಸೂರಿಗೆ...

ಅಪ್ಪ-ಮಗನ ಕಾರುಬಾರು...

ನಾ ಕಂಡ ಚಲನಚಿತ್ರಗಳ ಪೈಕಿ ಕೆಲವೊಂದರ Reviews...