ನಾ ಕಂಡ ಚಲನಚಿತ್ರಗಳ ಪೈಕಿ ಕೆಲವೊಂದರ Reviews...
೧. ಮಾಣಿಕ್ಯ
ಒಬ್ಬ ತಂದೆ ಆತನ ಮಗನನ್ನು ತನ್ನ ಊರಿನ ಜನತೆಗೆ ಪರಿಚಯ ಮಾಡಿಕೊಡುವ ರೀತಿ... ಅಲ್ಲಿನ ಜನರ ಪ್ರೀತಿ... ಇದು ಈ Movieನಲ್ಲಿ ಇಷ್ಟವಾಗಿದ್ದು...
#ಜೀವಾ_ಜೀವಾ
೨. ಕಿರಿಕ್ ಪಾರ್ಟಿ
An Osum Movie... Loved It...
ಪ್ರತಿಯೊಬ್ಬ ವಿದ್ಯಾರ್ಥಿಯೂ ನೋಡಬಹುದಾದ ಒಂದು ಅದ್ಬುತ ಚಲನಚಿತ್ರ...
ಆದರೆ ಕ್ಲೈಮಾಕ್ಸ್ ನ ಚೂರು ಚೆನ್ನಾಗಿ ಮುಗಿಸಬಹುದಿತ್ತು...
ಕೆಲವೊಂದು ಕಡೆ ಮಲಯಾಳಂನ Premam Movie Storyನ ಹೋಲ್ತಾ ಇತ್ತು...
ಏನೇ ಅಂದ್ರೂ Movie ಮಾತ್ರ ಸೂಪರ್...
೩. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಕೊಡುಗೆ ರಾಮಣ್ಣ ರೈ
ನಮ್ದು ಕಾಸರಗೋಡು ಆಗ್ತದೆ.
ಅದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು.
ಕೊಡುಗೆ: ರಾಮಣ್ಣ ರೈ.
ನಾನು ನೋಡಿದ ಸಿನೆಮಾಗಳಲ್ಲಿ ಅತ್ಯುತ್ತಮ ಸಿನೆಮಾ ಇದು... ನಾನು ಹಾಜರಿ ಹಾಕಿ ಬಂದಿದ್ದೇನೆ... ನೀವು ಬೇಗ ನಿಮ್ಮ ಸ್ನೇಹಿತ, ಸಕುಟುಂಬಿಕರೊಂದಿಗೆ ಹೋಗಿ ಹಾಜರಿ ಹಾಕಿ... ರಾಜಕಾರಣಿಗಳು, ಎಲ್ಲಾ ಮಕ್ಕಳು, ಕನ್ನಡ ಕನ್ನಡ ಅಂತ ಹೋರಾಟ ಮಾಡೋರು, ಉಪನ್ಯಾಸಕರು, ಎಲ್ಲರೂ ನೋಡಲೇ ಬೇಕಾದ ಸಿನೆಮಾ ಅಂತ ಹೇಳೋದಂಕ್ಕಿಂತ ಎಲ್ಲರೂ ಹೋಗಲೇಬೇಕಾದ ಶಾಲೆ ಅನ್ನೋದೇ ಸೂಕ್ತ...
ಒಂದೇ ಮಾತಲ್ಲಿ ಹೇಳುವುದಾದರೆ ಅದ್ಬುತ ಚಲನಚಿತ್ರ ಇದು. ಇದನ್ನು ನೋಡುವ ಸೌಭಾಗ್ಯವನ್ನಿತ್ತ ರಿಷಭ್ ಶೆಟ್ಟಿಯವರಿಗೆ ಕೃತಜ್ಞತೆಗಳು. ಅತ್ಯುತ್ತಮ ಸಾಹಿತ್ಯ, ಸಂಗೀತ ನಿರ್ದೇಶನ, ಇಂಪಾದ ಹಾಡುಗಳು, ಅತ್ಯುತ್ತಮ ಛಾಯಾಗ್ರಹಣ, ಸೂಪರ್ ಡೈಲಾಗ್ಸ್, ಕಾಮಿಡಿ, ನೋ ನೆಗೆಟಿವ್ ಕಮೆಂಟ್ಸ್, ಕೆಲವೊಂದು ತಪ್ಪಾಗೋದು ಸಹಜ, ಅದನ್ನೇ ಗಮಿನಿಸ್ತಾ ಹೋದ್ರೆ ನಾವು ಸಾಯೋ ತನಕನೂ ತೃಪ್ತಿ ಇಲ್ಲ.
ಪ್ರತಿಯೊಬ್ಬರೂ ತಮ್ಮ ಬಾಲ್ಯವನ್ನು ಸ್ಮರಿಸಿಕೊಳ್ಳುವ ಸುಂದರ ಕ್ಷಣ...
ಕಾಸರಗೋಡಿನ ಸರಕಾರಿ ಕನ್ನಡ ಮಾಧ್ಯಮ ಶಾಲೆ, ಪ್ರವೀಣ, ಪಲ್ಲವಿ, (ಪರಶು)ಶಾಂತರಾಮ ಉಪಾಧ್ಯಾಯರು, ಚಪ್ಪೆ ಚಾ, ರಾಮಣ್ಣ ರೈಗಳ ಮೇಲೆ ಕ್ರಷ್ ಆದದ್ದು, ಮಂಜುನಾಥ ಸ್ವಾಮಿ, ಮಹೀಂದ್ರ, ಭುಜಂಗ, ಬಾಲಕೃಷ್ಣ ಪಣಿಕ್ಕರ್, ಪಿ ಫಾರ್ ಪಿಕಾಕ್, ಕಾರಡ್ಕ, ಕರಂದಕ್ಕಾಡ್, ಮೈಸೂರು, ಮುತ್ತಪ್ಪನ್ ಲಾರಿ, ರಂಗಮಂದಿರ, ಮಮ್ಮುಟ್ಟಿ, ಸ್ಲೇಟು, ಪುಸ್ತಕ, ಥ್ಯಾಂಕ್ಯೂ, ಹ್ಯಾಪಿ ಜರ್ನಿ, ಸ್ಕಾರ್ಪಿಯೋ ಕಾರು, ಕರ್ನಾಟಕ, ಕೇರಳ, ಲವ್ ಯೂ ಸಿಸ್ಟರ್ ಥೂ ಲವ್ ಯೂ, ಚೆಂಬು, ಬಾಳೆಹಣ್ಣು, ಕತ್ತಿ, ಬನ್ಸ್, ಹಪ್ಪಳ, ಸ್ವಾಮಿ ಶರಣಂ ಅಯ್ಯಪ್ಪ, ವಿಭೂತಿ, ಮ್ಯಾಚ್ ಫಿಕ್ಸಿಂಗ್, ಕ್ರಿಕೆಟ್, 402, ಪೋಲಿಸ್, ಲಾಯರ್, ಕೋರ್ಟ್, ಅಂಬಾಸಿಡರ್ ಕಾರು, ಸಿಬಾಷ್ಟಿಯನ್, ಪೇರಳೆ, ಉಪ್ಪು, ಲಾಂಗ್ ಜಂಪ್, ಚಾಕೊಲೇಟ್ ಡಬ್ಬ, ಓಟ, ರಂಗೋಲಿ, ನೃತ್ಯ, ಹುಲಿವೇಷ, ಸೈಕಲ್, ಬಲೂನ್, ಸಮುದ್ರ ತೀರ, ಕಾಸರಗೋಡು ಬಸ್ ಸ್ಟಾಂಡ್, ನ್ಯಾಯಾಧೀಶರು, ಗಣಿತ ಶಿಕ್ಷಕರು, ಹೆಡ್ ಮಾಸ್ಟರ್, ಪಿಟಿ ಮಾಸ್ಟರ್, ಮಲಯಾಳಂ, ಕನ್ನಡ, ಮಂಗಳೂರು, ರಾಹುಲ್, ಮೈಕ್ ಫೋನ್, ಕೊರಿಯರ್ ಬಾಯ್, ಸತೀಶ, ಬಿನ್ನಿ ಜೋಸೆಫ್, ಎಂ.ಎಲ್.ಎ, ಎಂಐಟಿ, ಯಕ್ಷಗಾನ, ಭೂತಾರಾಧನೆ, ಪಂಚೆ - ಪ್ಯಾಂಟ್, ಕೂಲಿಂಗ್ ಗ್ಲಾಸ್, ಒಂದೇ ಕ್ಲಾಸ್ ನಲ್ಲಿ ಮೂರು ವರ್ಷದ ಅನುಭವ, ದೋಣಿ, ಬಸ್, ಬಾಲ್, ರಾಮಣ್ಣ ರೈಗಳ ಲಡ್ಡು, ತೂಗುಸೇತುವೆ, ಸೇತುವೆ, ಮಿಡಿಯಾ, ಫೋಟೋಗ್ರಾಫರ್, ವೀಡಿಯೋಗ್ರಾಫರ್, ಧರ್ಮಕ್ಕೆ ಪೆಟ್ಟು ತಿಂದದ್ದು, ಅಡಿಕೆ, ಮೈಸೂರಿನ ಪೆಟ್ಟಿಸ್ಟ್, ತಿಂದದ್ದು, ಟಿವಿ ನೋಡಿದ್ದು, ಉಗ್ರ ಹೋರಾಟ, ಅನಂತ ಪದ್ಮನಾಭ ಪಿ - ಪಿ ಫಾರ್ ಪೀಕಾಕ್...
ಐಸಿಯುನಲ್ಲಿ ಪೇಷೆಂಟ್ ಇಲ್ಲಾ ಅಂತ ಹಾಸ್ಪಿಟಲ್ ನ ಮುಚ್ಚೋಲ್ಲಾ, ಅಸೆಂಬ್ಲಿಗೆ - ಪಾರ್ಲಿಮೆಂಟ್ ಗೆ ಸದಸ್ಯರು ಬರೊಲ್ಲಾ ಅಂತ ಅಸೆಂಬ್ಲಿನ - ಪಾರ್ಲಿಮೆಂಟ್ ನ ಮುಚ್ಚೋಲ್ಲಾ, ಹಾಗೇ ಎಲ್ಲಿಯವರೆಗೆ ಕನ್ನಡದಲ್ಲಿ ಕಲೀಬೇಕು ಅಂತ ಒಬ್ಬ ವಿದ್ಯಾರ್ಥಿ ಶಾಲೆಗೆ ಬಂದು ಕೂತುಕೊಳ್ತಾನೋ ಅವನಿಗೆ ಕನ್ನಡದಲ್ಲಿ ಶಿಕ್ಷಣ ಕೊಡೋದು ಸರ್ಕಾರದ ಕರ್ತವ್ಯ, ಇಟ್ ಈಸ್ ಎ ಡ್ಯೂಟಿ ಆಫ್ ದ ಗವರ್ನ್‌ಮೆಂಟ್...
ದಟ್ಸ್ ಆಲ್ ಯುವರ್ ಹಾನರ್...
✍🏻 ಶ್ರೀಕರ ಕಲ್ಲೂರಾಯ.
ಇದರಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಕೊಡುಗೆ ರಾಮಣ್ಣ ರೈ ಚಲನಚಿತ್ರದ Review ನಿರ್ದೇಶಕರಾದ ರಿಷಭ್ ಶೆಟ್ಟಿಯವರಿಂದ ಮನ್ನಣೆಯನ್ನು ಪಡೆದುಕೊಂಡಿದೆ.
Thanks yaa😍😘🙏🙏🙏
ReplyDelete😇
ReplyDelete😊🙏
Delete