ನಾ ಕಂಡ ಸರಳತೆಯ ಹಾಡುಗಾರ್ತಿ - ರೂಪಶ್ರೀ ಬನೇರಿ (ರೂಪಕ್ಕ)...

ಸಂಗೀತ ಎನ್ನುವುದು ಭಗವಂತನ ಉತ್ಕೃಷ್ಟ ಉಪಾಸನಾ ಕ್ರಮಗಳಲ್ಲೊಂದು. ಆತ್ಮತೃಪ್ತಿಯ ಜತೆ ಹಲವರನ್ನು ಸಂತೃಪ್ತಗೊಳಿಸುವ ಏಕೈಕ ಅನನ್ಯ ಸಾಧನಾ ಮಾರ್ಗ. ಎಲ್ಲಾ ಕಲೆಗಳಲ್ಲೂ ಎಲ್ಲರೂ ರಮಿಸುವ ಕಲೆಯೆಂದರೆ ಸಂಗೀತ. ಎಲ್ಲಾ ಹಾಡುಗಳ ಮೂಲ ಸಂಗೀತ. ಚರಿತ್ರೆಯನ್ನು ನೋಡಿದರೆ, ಸಂಗೀತವು ಉತ್ಪತ್ತಿಯಾದ ಬಗ್ಗೆ ಬಹಳ ಊಹೆಗಳಿವೆ. ಅದರ ಮೂಲ ತಿಳಿಯುವುದು ಅಸಾಧ್ಯ. ಸಂಗೀತವನ್ನು ಕೇಳುವುದು ಕೇವಲ ಅದರ ರಸಸ್ವಾದನೆಗಷ್ಟೇ ಅಲ್ಲ. ಸಂಗೀತಕ್ಕೆ ಮನಸ್ಸು ಹಾಗೂ ದೇಹದ ಖಾಯಿಲೆಗಳನ್ನು ಕಡಿಮೆ ಮಾಡುವ ಶಕ್ತಿಯೂ ಇದೆ. ಇಂತಹ ಸಂಗೀತ ಲೋಕದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಸತತ ಶ್ರಮಪಡುವವರಲ್ಲೊಬ್ಬರು ಕು. ವಿದುಷಿ ರೂಪಶ್ರೀ ಬನೇರಿ. ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಬನೇರಿಯ ರಮೇಶ್ ಕಣ್ಣಾರಾಯ ಮತ್ತು ರಾಜೇಶ್ವರಿ ಕಣ್ಣಾರಾಯರ ಸುಪುತ್ರಿಯಾಗಿರುವ ಇವರು ತಾಯಿಯೇ ಮೊದಲ ಗುರು ಎಂಬಂತೆ ತನ್ನ ತಾಯಿಯಿಂದಲೇ ಸಂಗೀತಾಭ್ಯಾಸವನ್ನು ಪ್ರಾರಂಭಿಸಿದರು. ಪ್ರಾಥಮಿಕ ಶಿಕ್ಷಣವನ್ನು ಮುಂಡೂರು ಸರಕಾರಿ ಶಾಲೆಯಲ್ಲಿ, ಪ್ರೌಢ ಶಿಕ್ಷಣವನ್ನು ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ, ಪದವಿಪೂರ್ವ ಹಾಗೂ ಬಿ.ಎಸ್ಸಿ ಪದವಿಯನ್ನು ವಿವೇಕಾನಂದ ಕಾಲೇಜಿನಲ್ಲಿ, ಎಂ.ಎಸ್ಸಿ ಪದವಿಯನ್ನು ಫಿಲೋಮಿನಾ ಕಾಲೇಜಿನಲ್ಲಿ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದರು. ಶಿಕ್ಷಣ ಕ್ಷೇತ್ರದಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದ ಇವರು ತಾನು ಕಲಿತ ಸಾಂದೀಪನಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯಕ್...